Friday, 31 May 2019

ತಂಪು ಪಾನೀಯಗಳು Cold drinks

ಆಧುನಿಕ ಕಾಲದಲ್ಲಿ ಮಾನವನು ಸಭೆ ಸಮಾರಂಭ ಇನ್ನಿತರ ಸಂತೋಷದ ಸಮಯವನ್ನು ಆನಂದಿಸಲು ಇತ್ತೀಚಿನ ದಿನಗಳಲ್ಲಿ ತಂಪು ಪಾನೀಯಗಳನ್ನು ಆರಿಸಿಕೊಂಡಿದ್ದಾನೆ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದೆವೆ ಆದರೆ ನಿಜ ಸಂಗತಿ ಏನೆಂದರೆ ಪಾಶ್ಚಾತ್ಯ ದೇಶದಲ್ಲಿ ತಂಪು ಪಾನೀಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಆದರೆ ಭಾರತಿಯರಾದ ನಾವು ಇದರ ದುಷ್ಪರಿಣಾಮವನ್ನು ತಿಳಿದ ಮೇಲು ಉಪಯೋಗಿಸುವುದು ಬಿಡಲು ಆಗುತ್ತಿಲ್ಲ ಜನರು ಇವುಗಳನ್ನು ಕುಡಿಯುವದರಿಂದ ತಮ್ಮ ಆರೋಗ್ಯ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ವಿವಿಧ ಸ್ವಾದ ಮತ್ತು ಬಣ್ಣಗಳಿಂದ ಮಾರಟವಾಗುತ್ತಿವೆ ಅವುಗಳಲ್ಲಿ ಥಮ್ಸಪ್,ಮಾಜಾ, ಸ್ಪ್ರೈಟ್, ಕೋಕೋ ಕೋಲಾ, ಫಂಟಾ, ಸೇವನ್ ಅಫ್, ಇತ್ಯಾದಿ ತಂಪು ಪಾನಿಯಗಳಲ್ಲಿ ವಿವಿಧ ರೀತಿಯ ರಸಾಯನಿಕಗಳು ಒಳಗೊಂಡಿವೆ ಅವುಗಳಲ್ಲಿ ಪ್ರಮುಖವಾಗಿ ಕಾರ್ಬನಿಕ ಆಮ್ಲ, ಸ್ಯಾಕರಿನ್,ಕೆಫಿನ್,ಫಾಸ್ಫರಿಕ್ ಆಮ್ಲ, ಸಿಟ್ರೀಕ್ ಆಮ್ಲ,ಕೆರಾಮೆಲ್,ವಿವಿಧ ಸ್ವಾದಕಾರಕಗಳು ಇತ್ಯಾದಿಗಳಿಂದ ವಿವಿಧ ರೋಗಗಳಿಗೆ ಕಾರಣವಾಗಿವೆ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಹೃದಯಾಘಾತ, ಮೂತ್ರಪಿಂಡದ ವೈಫಲ್ಯತೆ, ದಂತ ಕ್ಷಯ, ಮೂಳೆಯ ಮೃದುತ್ವ,ಅಸ್ತಮಾ, ತೂಕದಲ್ಲಿ ಹೆಚ್ಚಳತೆ ಹೀಗೆ ಹಲವಾರು ಕಾಯಿಲೆಗಳು ತಂಪು ಪಾನೀಯ ( ಪೇಪ್ಸಿ ಕೋಲಾ) ಗಳಿಂದ ಉಂಟಾಗಿವೆ. ಎಲ್ಲಾ ವರ್ಗದ ಜನರು ತಂಪು ಪಾನಿಯ ಸೇವನೆ ಮಾಡುತ್ತಿದ್ದಾರೆ ಪೋಷಕಾಂಶವುಳ್ಳ ಎಳೆನೀರನ್ನು ಕಡೆಗಣಿಸುತ್ತಿದ್ದಾರೆ. ಜನಪ್ರೀಯ ಸಿನಿಮಾ ತಾರೆಯರು ಕೂಡಾ ಜಾಹಿರಾತಿನ ಮೂಲಕ ಇದರ ಜನಪ್ರೀಯತೆ ಬೇಳೆಯಲು ಕಾರಣರಾಗಿದ್ದಾರೆ ಪ್ರಭಾವಿ ದೃಕ ಶ್ರವಣೊಪಕರಣಗಳು ಕೂಡ ಜನಸಾಮಾನ್ಯರಲ್ಲಿ ಇದರ ಬಗ್ಗೆ ಭರ್ಜರಿ ಪ್ರಚಾರ ಮಾಡಿ ತಂಪು ಪಾನೀಯ ಸೇವಿಸಲು ಆಕರ್ಷಣಿಯವಾಗಿ ಮಾಡಿವೆ. ವಿದ್ಯಾವಂತರು, ಯುವಕರು ಹಾಗು ಸರ್ಕಾರ ಪ್ರಚಾರಕರಿಂದ ಜನಸಾಮಾನ್ಯರಲ್ಲಿ ತಂಪುಪಾನೀಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಭವ್ಯ ಭಾರತವನ್ನು ಕಟ್ಟಲು ಪಣತೊಡಬೇಕಾಗಿದೆ.

No comments:

Post a Comment

SSLC Key Answers Objection Entry Science world R Nagure

https://kseeb.karnataka.gov.in/objectionentry/SSLC_KeyAnswers  

Popular post