Sunday, 15 December 2019

ನೆಲ-ಜಲ ಸಂರಕ್ಷಣೆ


ನೆಲ - ಜಲ ಸಂರಕ್ಷಣೆ
ಬತ್ತಿದೆ ಭೂಮಿ ಒಂದು ಹನಿ ನೀರಿಲ್ಲ ಕಾಣದಾಗಿದೆ ಮೃಗಜಲ ಮರಭೂಮಿಯಾಗಿರುವ ಬರಡು ನೆಲದಲ್ಲಿ
ಹಿಡಿಶಾಪ ಹಾಕಿವೇ ಕಾಡುಪ್ರಾಣಿಗಳು ಈ ಮಾನವರು ಹೀಗೆಕೆ ಹೀಗೆಕೆ ಎಂದು ||
ಮಾಯವಾಗಿದೆ ಶುದ್ಧವಾದ ಗಾಳಿ, ಶುದ್ದವಾದ ಜಲ ಇನ್ನೇಲಿಹುದು ! ನಮಗೆ ಉಳಿಗಾಲ !!
ಸ್ವಚ್ಛವಾದ ನೆಲ ಜಲ ಇದ್ದರೆ ಅದೇ ಸ್ವರ್ಗ ನೋಡು ಇಲ್ಲದಿದ್ದರೆ ಅದೇ ನರಕ ನೋಡು ಎಲ್ಲಿ ತನಕ ನಿನ್ನ ಆರ್ಭಟ ಪರಿಸರದ ಕೂಗು ಇಗಲಾದರೂ ಆಲಿಸು ಓ ಮಾನವ ಓ ಮಾನವ.
ಬಂದಿದೆ ಸಮಯ ಇಗಲಾದರೂ ಬದಲಾಗು
ಪರಿಸರ ಪ್ರಜ್ಞೆಯಲ್ಲಿ ಜಾಗೃತನಾಗು !!
ಜಪಿಸು ಮಂತ್ರವ ನೀ ನೆಲ- ಜಲ ಉಳಿಸಲು ಪ್ರಕೃತಿ ಮಾತೆಯ ಒಡಲಲ್ಲಿ ಒಂದಾಗಿ ಜಾಗೃತನಾಗು!
ಆಗಲಿ ಜಲವನ್ನು ಉಳಿಸುವ ಕಾರ್ಯ ನಿನ್ನ ಮೂಲಕ " ಮಳೆ ನೀರಿನ ಕೊಯ್ಲಿನ " ಮೂಲಕ ಆಗಲಿ ನೆಲವನ್ನು ಉಳಿಸುವ ಕಾರ್ಯ ಪರಿಸರ ಉಳಿಸುವಲ್ಲಿ ಕಾಡನ್ನು ಬೆಳೆಸುವಲ್ಲಿ
ಜೀವಿಗಳಿರುವ ಏಕೈಕ ಗ್ರಹ ಭೂಮಿ ಈ ಮಾತನ್ನು ನೀ ತಿಳಿದು ಬಾಳು.
ಉಳಿಸು ಮೂಕ ಪ್ರಾಣಿಗಳನ್ನು ಉಳಿಸು ಭೂಮಿಯನ್ನು ಪರಿಸರ ಮಾಲಿನ್ಯದಿಂದ,
ಜಾಗತಿಕ ತಾಪಮಾನ ಏರಿಕೆಯಿಂದ ಬದಲಾಗಲಿ ನಿನ್ನ ಜೀವನಶೈಲಿ ಇಗಲೇ ಕೆಡಗಾಲ ಬರಲು ಕಾಯುತ್ತಿದೆ ಇದಕ್ಕೆ ನೀನೇ ಕಾರಣ ತಿಳಿದುಕೋ ಸತ್ಯವ !
ಪ್ರಕೃತಿ ಮಾತೆ ಸಿಟ್ಟಾಗಿಹಳು ಅದಕ್ಕೆ ನೀನೇ ಕಾರಣ ತಿಳಿದುಕೋ ಮಾನವ ಈ ಸತ್ಯವ ಆಗಲಿ ವನಮಹೊತ್ಸವ ಕಾರ್ಯ
ಆಗಲಿ ಹಸಿರು ಪ್ರಕೃತಿ , ಮೂಡಲಿ ಪಕ್ಷಿಗಳ ಚಿಲಿಪಿಲಿ ಗಾನ, ಪ್ರಾಣಿಗಳ ಕೂಗು ಹೊರಡಿಸಲಿ ಇಂಚರ ಮೌನ
ಎಲ್ಲಾ ಕಡೆ ನವ ಉತ್ಸಾಹ ಮೊಳಗಲಿ ನಡೆ ಮೊದಲು ಬದಲಾಗು ಬದಲಾಗು !!
ಇಂದ :- ಶ್ರೀ ರಾಜೇಶ.ಎನ್.ನಾಗೂರೆ ಸ.ಶಿ ಸ.ಪ್ರೌ.ಶಾಲೆ ಕಲಗುರ್ತಿ ತಾ|| ಚಿತ್ತಾಪೂರ ಜಿ|| ಕಲಬುರಗಿ


No comments:

Post a Comment

SSLC Key Answers Objection Entry Science world R Nagure

https://kseeb.karnataka.gov.in/objectionentry/SSLC_KeyAnswers  

Popular post