Sunday, 1 December 2019

ಶಿಕ್ಷಕ ಆಗು ನೀ ರಕ್ಷಕ ಕವಿತೆ

ಶಿಕ್ಷಕ ಆಗು ನೀ ರಕ್ಷಕ ಕವಿತೆ 
ಶಿಕ್ಷಕ ಆಗು ನೀ ರಕ್ಷಕ
ವಿದ್ಯಾರ್ಥಿಗಳ ಬಾಳಲಿ ಆಗು ನೀ ದಾರಿ ದೀಪಕ.
ಸದಾ ಹೋಸತನ ಕಲಿಕೆಯಲ್ಲಿ ಉತ್ಸಕ
ಆಗು ನೀ ದೇಶದ ಉದ್ಧಾರಕ.
ಸದಾ ಕ್ರಿಯಾಶೀಲನಾಗಿ ಬೋಧಿಸು ನೀ ಪ್ರೇರಕ.
ನಿನ್ನಲ್ಲಿ ನೀನಾಗಿ ಭವಿಷ್ಯ ನಿರ್ಧರಿಸುವ ಸೇಲೆಯಾಗಿ ಆಗು ನೀ ರಾಷ್ಟ್ರದ ಶಿಲ್ಪಕಾರಕ.
ತನ್ನ ನೋವುಗಳನೆಲ್ಲ ಮೈ ಮರೆತು ಬೆಲ್ಲದಂತೆ ಸವಿಯನುಣಿಸುವ ಸೃಜನಶೀಲ ಬೋಧನಕಾರ.
ನೀನ್ನಲ್ಲಿರುವ ಜ್ಞಾನದ ಮಕರಂದವನ್ನು ಹರಡು ನೀ ಸಂವಹನ ಕಾರ.
ಭವಿಷ್ಯತೀನ ಯುವ ಶಕ್ತಿಯ ಅಡಿಪಾಯವನ್ನು ಹಾಕುವ ನೀ ಸೈನೀಕ ನೇತಾರ.
ಶಾಲೆಯೆಂಬ ವಿದ್ಯಾಮಂದಿರಕ್ಕೆ ನೀನೇ ಕೀರಿಟವಾಗಿ ಶೋಭಿಸುತ್ತಿರುವೇ ಓ ಸ್ಫೂರ್ತಿಯ ಕಲಾಕಾರ.
ಪ್ರತಿಯೊಂದು ಮಗುವೀಗೆ ನೀ ಮಾದರಿಯಾಗಿ ನಾವೀನ್ಯತೆಯ ಹರಿಕಾರನಾಗಿರುವ ಶೋಧನಕಾರ.
ಪ್ರತಿಯೊಂದು ಮಗು ಅಮೂಲ್ಯ ಅನನ್ಯ ಇದ್ದರು ಅರಿತು ಬೋಧಿಸುವ ನೀ ಚೇತನದ ಆಗರ.
ಚಿಂತನೆ, ನಾವೀನ್ಯತೆಗೆ ಮಾನ್ಯತೆ ನೀಡಿ ಬಾಲ ವಿಜ್ಞಾನಿಯಾಗಲು ಸ್ಪೂರ್ತಿ ಸುವ ನೀ ವಿಜ್ಞಾನದ ರಕ್ಷಕ.
ರಾಷ್ಟ್ರೀಯ ಐಕ್ಯತೆ ಸಾಧಿಸಲು ನಿನ್ನ ಚೇತನ ಶೀಲವಾದ ಸಂವಹನವು ಪ್ರೇರಕವಾಗಿ ಶಾಂತಿಯ ನೆಲೆಸಲು ಸಹಾಯಕ.
ಅನುದಿನವು ಮಗುವಿನಲ್ಲಿ ಮಗುವಾಗಿ ಅವರಿಗೆ ಬೆಳಕಾಗಿ ಹೊಸತನವನ್ನು ಅರಿಯುವ ಮೋಡಿಗಾರ.
ಎಲ್ಲ ವಿದ್ಯಾರ್ಥಿಗಳಿಗೆ ನೀನೆ ನಾಯಕ ನಿನ್ನ ಸೇವೆ ಸಾರ್ಥದಾಯಕ.
ಇರಲಿ ಇದೇ ಅದ್ಯಮ್ಯ ಚೇತನ ವಿಶ್ವಾಸ ನಿನ್ನ ಸೇವೆ ಇತರರಿಗೆ ಮಾದರಿಯಾಗಲಿ ಓ ಹೃದಯವಂತ.
ಶಕ್ತಿಯೇ ಜೀವನ ನೀರಸವೇ ಮರಣ ಸ್ವಾಮೀಜೀ ಯವರ ಸ್ಪೂರ್ತಿಯ ನುಡಿಗಳೇ ನಿನ್ನ ಗುರಿಗೆ ಗುರುಗಳು ಓ ಧಿಮಂತ ಶಕ್ತಿಯ ಉದ್ಭವಕಾರ.
     
ಇಂದ:- ಶ್ರೀ ರಾಜೇಶ.ಎನ್.ನಾಗೂರೆ ವಿಜ್ಞಾನ ಸಹ ಶಿಕ್ಷಕರು ಸ.ಪ್ರೌ.ಶಾ.ಕಲಗುರ್ತಿ.



No comments:

Post a Comment

SSLC Key Answers Objection Entry Science world R Nagure

https://kseeb.karnataka.gov.in/objectionentry/SSLC_KeyAnswers  

Popular post