Sunday, 20 August 2023

Ek Pedh Desh Ke Naam

Happy Photography Day

ವಿಶ್ವ ಯೋಗ ದಿನಾಚರಣೆ ಜೂನ್ 21 ೨೦೨೩

International Yoga Day Yoga for Vasudhaiva Kutumbakam Kalaburgi

ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಾದ(ಬಿ) ಕಲಬುರಗಿ ಸಾಮಾನ್ಯ ವರ್ಗಾವಣೆಯಲ್ಲಿ ಹೊಸದಾಗಿ ಆಗಮಿಸಿದ ಶಿಕ್ಷಕರಿಗೆ ಸನ್ಮಾನ‌

ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ೧೫ ಅಂಶಗಳು.

Vermi composting ಎರೆಗೊಬ್ಬರ ಹಾಗೂ ಅದರಿಂದ ಬೆಳೆಸಿದ ಸಸಿಗಳು ಕೃಪೆ: ಮೇಘರಾಜ ಕುಲಕರ್ಣಿ ಸರ್ ಕಲಬುರಗಿ

CCE ಆಧಾರಿತ ಶ್ರೇಣಿ ಪಟ್ಟಿ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಅತಿ ಉಪಯುಕ್ತ

Indian Literacy Project Lab in a Kit Training Kalaburgi

ನಮ್ಮ ಜೀವನದ ಪ್ರಮುಖವಾದ ಅದ್ಭುತಗಳು


1.🌷 *ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ*

2🌷 *ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ*

3🌷 *ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ*

4🌷 *ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ*

5🌷 *ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ : ಪರೋಪಕಾರ*

6🌷 *ಅತ್ಯಂತ ಶ್ರೇಷ್ಠ  ಸ್ವಭಾವ: ತಾಳ್ಮೆ*

7🌷 *ಅತ್ಯಂತ ಕೆಟ್ಟಗುಣ: ಪರನಿಂದೆ*

8🌷 *ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ: ಅಜೀರ್ಣ*

9🌷 *ಚಟಗಳಲ್ಲಿ ಅತೀ ಕೆಟ್ಟ ಚಟ: ಚಾಡಿ ಹೇಳುವದು*

10🌷 *ಬಂಧುಗಳಲ್ಲಿ ಶ್ರೇಷ್ಠ ಬಂಧು: ವಿಶ್ವಾಸ*

11🌷 *ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ: ಅಹಂಕಾರ*

12🌷 *ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ: ದೈವಬಲ*

13🌷 *ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ: ಆಧ್ಯಾತ್ಮಿಕ  ಶಿಕ್ಷಣ*

14🌷 *ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು: ಸಾಲಬಾಧೆ*

15🌷 *ಹುಚ್ಚುಗಳಲ್ಲಿ ಅತೀ ಕೆಟ್ಟಹುಚ್ಚು: ಹೊಗಳಿಸಿಕೊಳ್ಳುವದು*

16🌷 *ಎಲ್ಲಾರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ:  ಆತ್ಮವಿಶ್ವಾಸ*

17🌷 *ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು  ಕತ್ತಲಾಗಿರುವುದು: ಅಜ್ಞಾನ*

18🌷 *ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ: ಸಜ್ಜನರ ನಿಷ್ಕ್ರಿಯತೆ*

19🌷 *ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ: ನಾಲಿಗೆ*

20🌷 *ವರಗಳಲ್ಲಿ ಅತೀ ದೊಡ್ಡ ವರ: ಆರೋಗ್ಯ*

21🌷 *ದೊಡ್ಡಶ್ರೀಮಂತಿಕೆ: ಸಂತೃಪ್ತಿ*

22🌷 *ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ: ಮೌನ*

ಪ್ರತಿಯೊಬ್ಬ ಹಳೆಯ ಮಿತ್ರನೂ ಒಂದು ಕೋಹಿನೂರ ವಜ್ರ ಲೇಖನ

ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ
     ನಿಧಾನಕ್ಕೆ ನಡೆಯುತ್ತಿದ್ದಾರೆ 
           ನನ್ನ ಹಾಗೇ…

ಹರೆಯದಲ್ಲಿ ಮಿಂಚುತ್ತಿದ್ದ
       ಪಟ್ಟುಗಳೆಲ್ಲ ಈಗ  
            ಮಾಯವಾಗಿವೆ.

ಯಾರಿಗೋ ಬೊಜ್ಜು ಬಂದಿದೆ
    ಇನ್ಯಾರಿಗೋ 
       ಕೂದಲು ಹಣ್ಣಾಗುತ್ತಿವೆ.

    ಎಲ್ಲರ ತಲೆಯ ಮೇಲೆ 
        ಜವಾಬ್ದಾರಿ ಎಲ್ಲರಿಗೂ 
          ಸಣ್ಣ ಪುಟ್ಟ ಅಜಾರಿ..

ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು

   ದಿನವಿಡೀ ಓಡುತ್ತಿದ್ದವರು 
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.

ಯಾರಿಗೂ ಸಮಯವಿಲ್ಲ
    ಎಲ್ಲರ ಕಣ್ಣಲ್ಲೂ ನೋವಿನ 
        ಛಾಯೆ ಛಾಯೆ…

ಎಲ್ಲರಿಗೂ  ಅನ್ನಿಸುವುದು
ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು.!!
ಕೊನೆಯ ದಿನಗಳಲ್ಲಿ 
ಅಮ್ಮನ ಸೇವೆ ಮಾಡಬೇಕಿತ್ತು.!!

ಕಲವರಿಗೆ ಪಶ್ಚಾತ್ತಾಪ..
ಹೆಂಡತಿಯನ್ನ ಇನ್ನೂ ಪ್ರೀತಿಸಬೇಕಿತ್ತು.. ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕಿತ್ತು ?

ಮಕ್ಕಳಿಗೆ..
ಸಮಯ ಕೊಡಬೇಕಿತ್ತು 
ಮಿತ್ರನೊಂದಿಗೆ ..
ಜಗಳ  ಮಾಡಬಾರದಿತ್ತು
ಎಂಬ ಏನೇನೋ ಹಳೇ ನೆನಪು ಕಾಡುತ್ತವೆ.!?.

ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ ..!!!

ಹಳೆಯ ಭಾವಚಿತ್ರಗಳ 
ನೋಡಿ , ನೋಡಿ, ನೋಡಿ.. ಈಗಲೂ …
  ಮನಸ್ಸು ತುಂಬಿ  
    ಬ ರು ತ್ತ  ದೆ .  

ಈ ಸಮಯವೂ 
ಎಂಥ ವಿಚಿತ್ರ ನೋಡಿ!
ಹೇಗೆ ಸವೆದು ಹೋಗುತ್ತದೆ !?!

ನಿನ್ನೆಯ 
ನ. ವ. ಯು. ವ. ಕ .
ನನ್ನ ಮಿತ್ರ
ಇಂದು ವೃದ್ಧನಂತೆ ಕಾಣುತ್ತಾನೆ.

ಒಂದೊಮ್ಮೆ (ಮರೀಚಿಕೆ)
   ಕನಸು ಕಾಣುತ್ತಿದ್ದವರು
    ಗತಿಸಿದ ದಿನಗಳಲ್ಲಿ 
      ಕಳೆದು ಹೋಗಿದ್ದಾರೆ
    (ಹೋಗುತ್ತಲೂ ಇದ್ದಾರೆ)..

ಆದರೆ ಇದು ಪರಮ ಸತ್ಯ ! ಸತ್ಯ.
ಎಲ್ಲಾ ಮಿತ್ರರೂ ನೋಡ ನೋಡುತ್ತಲೇ ಹಣ್ಣಾಗುತ್ತಿದ್ದಾರೆ.! ಕೆಲವ್ರು ಹಣ್ ಹಣ್
ಕೂಡ ಆಗ್ತಾ ಇದ್ದಾರೆ..!!!

ಮಿತ್ರರೇ , 
ಮುಂದೆ ಸಮಯದ ಲಯ
ಇನ್ನೂ ತೀವ್ರವಾಗಲಿದೆ. ! ?
ಈಗ ಉಳಿದ ಬದುಕೇ ಒಂದು ದೊಡ್ಡ 
   ' ಬ ಹು ಮಾ ನ ‘

ಆದ್ದರಿಂದ,
ಮಾಡುವುದನ್ನು ಮಾಡಿ ಮುಗಿಸಿ
ಕೊಡುವುದನ್ನು ಕೊಟ್ಟು ಮುಗಿಸಿ
ಮನಸಿನ ಆಸೆಗಳನ್ನು
ಬಚ್ಚಿಟ್ಟು ಕೊರಗದಿರಿ
ನಿರಾಳ ಮನಸ್ಸಿನಿಂದ ಬದುಕಿ.!!

ಪ್ರತಿಯೊಬ್ಬ ಹಳೆಯ 
ಮಿತ್ರನೂ ಒಂದು
ಕೊ ಹಿ ನೂ ರ್  ವಜ್ರ!!!
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು 
ಸದಾ ಮೆಲುಕುತ್ತಾ
ನಗು ನಗು ನಗುತ್ತ ಕಳೆಯಿರಿ.

ಎಲ್ಲಾ ನನ್ನ ಆತ್ಮೀಯ ಮಿತ್ರರಿಗೆ ಸಮರ್ಪಣೆ.....
ಇಂದ: ಶ್ರೀ ರಾಜೇಶ ನಾಗೂರೆ ಸ.ಶಿ Karnataka Public School Aurad(B) Kalaburgi.

ಗುಬ್ಬಿಗಳ ದಿನಾಚರಣೆ ಮಾರ್ಚ್ 20 ಲೇಖನ

ಪ್ರತಿ ವರ್ಷ ಮಾರ್ಚ್ 20ರಂದು ಗುಬ್ಬಿಗಳ ದಿನಾಚರಣೆ ಆಚರಿಸುತ್ತೇವೆ ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಅಂಗಗಳಾಗಿವೆ ತಮಗೆಲ್ಲ ಗೊತ್ತಿದೆ ಗುಬ್ಬಚ್ಚಿಗಳು ತಿನ್ನುವ ಪ್ರೋಟೀನ್ ಕಾಳುಗಳು ಅವುಗಳಿಗೆ ಸರಿಯಾಗಿ ದೊರಕುತ್ತಿಲ್ಲ ನೀರಿನ ತಾಣಗಳು ಕಡಿಮೆಯಾಗುತ್ತವೆ ತಾರಸಿ ಉದ್ಯಾನವನ ಹರಡುಕೊಂಡ ಮನೆಗಳು ಅವುಗಳ ಸಂಖ್ಯೆಗಳು ಕೂಡ ಕಡಿಮೆಯಾಗುತ್ತಿದೆ ಪ್ಲಾಸ್ಟಿಕ್ ಪೊಟ್ಟಣ ಬಳಕೆ ಹೆಚ್ಚಿಗೆ ಆಗ್ತಾ ಇದೆ ಇದರಿಂದ ಗುಬ್ಬಿಗಳಿಗೆ ಆಹಾರ ಸೇವಿಸಲು ಕಷ್ಟ ಆಗುತ್ತಿದೆ ಹೀಗಾಗಿ ಹಿಂದಿನ ನಾಲ್ಕು ದೇಶಗಳು ನೋಡಿದಾಗ 75% ಕಡಿಮೆಯಾಗಿದೆ ನಾಸಿಕ್ ನೇಚರ್ ಫಾರೆವರ್ ಸೊಸೈಟಿ ಕೂಡ ಗುಬ್ಬಿ ಗಣತಿ ಮಾಡುತ್ತಿದೆ ಈಗ ವಿಶ್ವವಿದ್ಯಾಂತ ಗುಬ್ಬಿಗಳು ಸುದ್ದಿಯಲ್ಲಿವೆ ನಮ್ಮ ಮನೆಯ ಪಕ್ಷಿ ಎಂಬ ಆಪ್ತ ಭಾವದೊಂದಿಗೆ ನೆನಪಾಗುವ ಚಿಕ್ಕಗಾತ್ರದ ಗುಬ್ಬಚ್ಚಿಯ ಆವಸ ಈಗ ಛಿದ್ರ ಗೊಂಡಿದೆ ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಅಂಗಗಳ ಎಂಬುದರ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಬೇಕಾಗಿದೆ.ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪಕ್ಷಿಗಳ‌ ಸಂತತಿ ಬಗ್ಗೆ ತಿಳಿಸಿ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡುಸುವಂತಹ ಪ್ರಯತ್ನ ಆಗಬೇಕಾದಿದೆ ಪಕ್ಷಿ ಪ್ರೀತಿ ಬೆಳೆಸಿ ಅವರನ್ನು ವಿಶ್ವಮಾನವನಾಗಿ ಮಾಡಬೇಕಾಗಿದೆ.
ಇಂದ: ರಾಜೇಶ ನಾಗೂರೆ Msc MEd ಸಹ ಶಿಕ್ಷಕರು ಸ.ಪ್ರೌ.ಶಾಲೆ ಕಲಗುರ್ತಿ ಕಲಬುರಗಿ ಮಾಹಿತಿ ಸಂಗ್ರಹ ಕೃಪೆ: ಪ್ರಜಾವಾಣಿ Data Collection . 

Popular post