PHOTOS OF OUR SCHOOL ACTIVITIES
Thursday, 24 August 2023
Sunday, 20 August 2023
ವಿಶ್ವ ಯೋಗ ದಿನಾಚರಣೆ ಜೂನ್ 21 ೨೦೨೩
International Yoga Day Yoga for Vasudhaiva Kutumbakam Kalaburgi
ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ೧೫ ಅಂಶಗಳು.
Indian Literacy Project Lab in a Kit Training Kalaburgi
ನಮ್ಮ ಜೀವನದ ಪ್ರಮುಖವಾದ ಅದ್ಭುತಗಳು
1.🌷 *ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ*
2🌷 *ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ*
3🌷 *ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ*
4🌷 *ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ*
5🌷 *ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ : ಪರೋಪಕಾರ*
6🌷 *ಅತ್ಯಂತ ಶ್ರೇಷ್ಠ ಸ್ವಭಾವ: ತಾಳ್ಮೆ*
7🌷 *ಅತ್ಯಂತ ಕೆಟ್ಟಗುಣ: ಪರನಿಂದೆ*
8🌷 *ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ: ಅಜೀರ್ಣ*
9🌷 *ಚಟಗಳಲ್ಲಿ ಅತೀ ಕೆಟ್ಟ ಚಟ: ಚಾಡಿ ಹೇಳುವದು*
10🌷 *ಬಂಧುಗಳಲ್ಲಿ ಶ್ರೇಷ್ಠ ಬಂಧು: ವಿಶ್ವಾಸ*
11🌷 *ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ: ಅಹಂಕಾರ*
12🌷 *ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ: ದೈವಬಲ*
13🌷 *ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ: ಆಧ್ಯಾತ್ಮಿಕ ಶಿಕ್ಷಣ*
14🌷 *ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು: ಸಾಲಬಾಧೆ*
15🌷 *ಹುಚ್ಚುಗಳಲ್ಲಿ ಅತೀ ಕೆಟ್ಟಹುಚ್ಚು: ಹೊಗಳಿಸಿಕೊಳ್ಳುವದು*
16🌷 *ಎಲ್ಲಾರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ: ಆತ್ಮವಿಶ್ವಾಸ*
17🌷 *ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು: ಅಜ್ಞಾನ*
18🌷 *ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ: ಸಜ್ಜನರ ನಿಷ್ಕ್ರಿಯತೆ*
19🌷 *ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ: ನಾಲಿಗೆ*
20🌷 *ವರಗಳಲ್ಲಿ ಅತೀ ದೊಡ್ಡ ವರ: ಆರೋಗ್ಯ*
21🌷 *ದೊಡ್ಡಶ್ರೀಮಂತಿಕೆ: ಸಂತೃಪ್ತಿ*
22🌷 *ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ: ಮೌನ*
ಪ್ರತಿಯೊಬ್ಬ ಹಳೆಯ ಮಿತ್ರನೂ ಒಂದು ಕೋಹಿನೂರ ವಜ್ರ ಲೇಖನ
ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ
ನಿಧಾನಕ್ಕೆ ನಡೆಯುತ್ತಿದ್ದಾರೆ
ನನ್ನ ಹಾಗೇ…
ಹರೆಯದಲ್ಲಿ ಮಿಂಚುತ್ತಿದ್ದ
ಪಟ್ಟುಗಳೆಲ್ಲ ಈಗ
ಮಾಯವಾಗಿವೆ.
ಯಾರಿಗೋ ಬೊಜ್ಜು ಬಂದಿದೆ
ಇನ್ಯಾರಿಗೋ
ಕೂದಲು ಹಣ್ಣಾಗುತ್ತಿವೆ.
ಎಲ್ಲರ ತಲೆಯ ಮೇಲೆ
ಜವಾಬ್ದಾರಿ ಎಲ್ಲರಿಗೂ
ಸಣ್ಣ ಪುಟ್ಟ ಅಜಾರಿ..
ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು
ದಿನವಿಡೀ ಓಡುತ್ತಿದ್ದವರು
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.
ಯಾರಿಗೂ ಸಮಯವಿಲ್ಲ
ಎಲ್ಲರ ಕಣ್ಣಲ್ಲೂ ನೋವಿನ
ಛಾಯೆ ಛಾಯೆ…
ಎಲ್ಲರಿಗೂ ಅನ್ನಿಸುವುದು
ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು.!!
ಕೊನೆಯ ದಿನಗಳಲ್ಲಿ
ಅಮ್ಮನ ಸೇವೆ ಮಾಡಬೇಕಿತ್ತು.!!
ಕಲವರಿಗೆ ಪಶ್ಚಾತ್ತಾಪ..
ಹೆಂಡತಿಯನ್ನ ಇನ್ನೂ ಪ್ರೀತಿಸಬೇಕಿತ್ತು.. ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕಿತ್ತು ?
ಮಕ್ಕಳಿಗೆ..
ಸಮಯ ಕೊಡಬೇಕಿತ್ತು
ಮಿತ್ರನೊಂದಿಗೆ ..
ಜಗಳ ಮಾಡಬಾರದಿತ್ತು
ಎಂಬ ಏನೇನೋ ಹಳೇ ನೆನಪು ಕಾಡುತ್ತವೆ.!?.
ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ ..!!!
ಹಳೆಯ ಭಾವಚಿತ್ರಗಳ
ನೋಡಿ , ನೋಡಿ, ನೋಡಿ.. ಈಗಲೂ …
ಮನಸ್ಸು ತುಂಬಿ
ಬ ರು ತ್ತ ದೆ .
ಈ ಸಮಯವೂ
ಎಂಥ ವಿಚಿತ್ರ ನೋಡಿ!
ಹೇಗೆ ಸವೆದು ಹೋಗುತ್ತದೆ !?!
ನಿನ್ನೆಯ
ನ. ವ. ಯು. ವ. ಕ .
ನನ್ನ ಮಿತ್ರ
ಇಂದು ವೃದ್ಧನಂತೆ ಕಾಣುತ್ತಾನೆ.
ಒಂದೊಮ್ಮೆ (ಮರೀಚಿಕೆ)
ಕನಸು ಕಾಣುತ್ತಿದ್ದವರು
ಗತಿಸಿದ ದಿನಗಳಲ್ಲಿ
ಕಳೆದು ಹೋಗಿದ್ದಾರೆ
(ಹೋಗುತ್ತಲೂ ಇದ್ದಾರೆ)..
ಆದರೆ ಇದು ಪರಮ ಸತ್ಯ ! ಸತ್ಯ.
ಎಲ್ಲಾ ಮಿತ್ರರೂ ನೋಡ ನೋಡುತ್ತಲೇ ಹಣ್ಣಾಗುತ್ತಿದ್ದಾರೆ.! ಕೆಲವ್ರು ಹಣ್ ಹಣ್
ಕೂಡ ಆಗ್ತಾ ಇದ್ದಾರೆ..!!!
ಮಿತ್ರರೇ ,
ಮುಂದೆ ಸಮಯದ ಲಯ
ಇನ್ನೂ ತೀವ್ರವಾಗಲಿದೆ. ! ?
ಈಗ ಉಳಿದ ಬದುಕೇ ಒಂದು ದೊಡ್ಡ
' ಬ ಹು ಮಾ ನ ‘
ಆದ್ದರಿಂದ,
ಮಾಡುವುದನ್ನು ಮಾಡಿ ಮುಗಿಸಿ
ಕೊಡುವುದನ್ನು ಕೊಟ್ಟು ಮುಗಿಸಿ
ಮನಸಿನ ಆಸೆಗಳನ್ನು
ಬಚ್ಚಿಟ್ಟು ಕೊರಗದಿರಿ
ನಿರಾಳ ಮನಸ್ಸಿನಿಂದ ಬದುಕಿ.!!
ಪ್ರತಿಯೊಬ್ಬ ಹಳೆಯ
ಮಿತ್ರನೂ ಒಂದು
ಕೊ ಹಿ ನೂ ರ್ ವಜ್ರ!!!
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು
ಸದಾ ಮೆಲುಕುತ್ತಾ
ನಗು ನಗು ನಗುತ್ತ ಕಳೆಯಿರಿ.
ಎಲ್ಲಾ ನನ್ನ ಆತ್ಮೀಯ ಮಿತ್ರರಿಗೆ ಸಮರ್ಪಣೆ.....
ಇಂದ: ಶ್ರೀ ರಾಜೇಶ ನಾಗೂರೆ ಸ.ಶಿ Karnataka Public School Aurad(B) Kalaburgi.
ಗುಬ್ಬಿಗಳ ದಿನಾಚರಣೆ ಮಾರ್ಚ್ 20 ಲೇಖನ
ಪ್ರತಿ ವರ್ಷ ಮಾರ್ಚ್ 20ರಂದು ಗುಬ್ಬಿಗಳ ದಿನಾಚರಣೆ ಆಚರಿಸುತ್ತೇವೆ ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಅಂಗಗಳಾಗಿವೆ ತಮಗೆಲ್ಲ ಗೊತ್ತಿದೆ ಗುಬ್ಬಚ್ಚಿಗಳು ತಿನ್ನುವ ಪ್ರೋಟೀನ್ ಕಾಳುಗಳು ಅವುಗಳಿಗೆ ಸರಿಯಾಗಿ ದೊರಕುತ್ತಿಲ್ಲ ನೀರಿನ ತಾಣಗಳು ಕಡಿಮೆಯಾಗುತ್ತವೆ ತಾರಸಿ ಉದ್ಯಾನವನ ಹರಡುಕೊಂಡ ಮನೆಗಳು ಅವುಗಳ ಸಂಖ್ಯೆಗಳು ಕೂಡ ಕಡಿಮೆಯಾಗುತ್ತಿದೆ ಪ್ಲಾಸ್ಟಿಕ್ ಪೊಟ್ಟಣ ಬಳಕೆ ಹೆಚ್ಚಿಗೆ ಆಗ್ತಾ ಇದೆ ಇದರಿಂದ ಗುಬ್ಬಿಗಳಿಗೆ ಆಹಾರ ಸೇವಿಸಲು ಕಷ್ಟ ಆಗುತ್ತಿದೆ ಹೀಗಾಗಿ ಹಿಂದಿನ ನಾಲ್ಕು ದೇಶಗಳು ನೋಡಿದಾಗ 75% ಕಡಿಮೆಯಾಗಿದೆ ನಾಸಿಕ್ ನೇಚರ್ ಫಾರೆವರ್ ಸೊಸೈಟಿ ಕೂಡ ಗುಬ್ಬಿ ಗಣತಿ ಮಾಡುತ್ತಿದೆ ಈಗ ವಿಶ್ವವಿದ್ಯಾಂತ ಗುಬ್ಬಿಗಳು ಸುದ್ದಿಯಲ್ಲಿವೆ ನಮ್ಮ ಮನೆಯ ಪಕ್ಷಿ ಎಂಬ ಆಪ್ತ ಭಾವದೊಂದಿಗೆ ನೆನಪಾಗುವ ಚಿಕ್ಕಗಾತ್ರದ ಗುಬ್ಬಚ್ಚಿಯ ಆವಸ ಈಗ ಛಿದ್ರ ಗೊಂಡಿದೆ ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಅಂಗಗಳ ಎಂಬುದರ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಬೇಕಾಗಿದೆ.ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪಕ್ಷಿಗಳ ಸಂತತಿ ಬಗ್ಗೆ ತಿಳಿಸಿ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡುಸುವಂತಹ ಪ್ರಯತ್ನ ಆಗಬೇಕಾದಿದೆ ಪಕ್ಷಿ ಪ್ರೀತಿ ಬೆಳೆಸಿ ಅವರನ್ನು ವಿಶ್ವಮಾನವನಾಗಿ ಮಾಡಬೇಕಾಗಿದೆ.
ಇಂದ: ರಾಜೇಶ ನಾಗೂರೆ Msc MEd ಸಹ ಶಿಕ್ಷಕರು ಸ.ಪ್ರೌ.ಶಾಲೆ ಕಲಗುರ್ತಿ ಕಲಬುರಗಿ ಮಾಹಿತಿ ಸಂಗ್ರಹ ಕೃಪೆ: ಪ್ರಜಾವಾಣಿ Data Collection .
ಲೇಖನ: ನಗು ನಗುತ್ತಾ ನೂರು ವರ್ಷ ಬಾಳಿ
ನಗು ಎನ್ನುವುದು ಸರ್ವ ಕಾಯಿಲೆಗೂ ಔಷಧವಿದ್ದಂತೆ. ಎಂತಹವರನ್ನಾದರೂ ತನ್ನೆಡೆಗೆ ಸೆಳೆಯುವ ಸಾಮರ್ಥ್ಯ ನಗುವಿಗಿದೆ. ‘ನಗು ನಗುತ್ತಾ ನೂರು ವರ್ಷ ಬಾಳಿ’ ಎನ್ನುವ ನಮ್ಮ ಹಿರಿಯರ ಆಶೀರ್ವಾದ ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ? ಸ್ನಾಯುಗಳ ಚಲನೆಯಿಂದ ಮುಖದಲ್ಲಿ ವ್ಯಕ್ತವಾಗುವ ಸುಂದರವಾದ ಭಾವನೆಯೇ ನಗು.
ನಗುವಿನಂತೆಯೇ ಮನುಷ್ಯ ಇನ್ನೂ ಹಲವಾರು ಭಾವನೆಗಳ ಮೂಟೆಗಳನ್ನು ಹೊತ್ತಿದ್ದಾನೆ. ಈ ಮೂಟೆಗಳಲ್ಲಿ ನಗುವಿನ ಚೀಲದ ಬಾಯನ್ನು ತೆರೆದಿಟ್ಟರೆ ಸಾಕು. ಬೇಡದ ಭಾವನೆಗಳೂ ಹಾಗೂ ಅದರಿಂದುಂಟಾಗುವ ದುಷ್ಪರಿಣಾಮಗಳು ತನ್ನಿಂದ ತಾನೇ ಬಾಯನ್ನು ಹೊಲಿದುಕೊಳ್ಳುತ್ತವೆ. ದಾರಿಯಲ್ಲಿ ನೆಡೆದು ಹೋಗುತ್ತಿರುವಾಗ, ಪರಿಚಯವಿರುವವರು ನಕ್ಕು ಮಾತನಾಡಿಸುವುದು ಸಹಜ. ಅದೇ ದಾರಿಯಲ್ಲಿ ಪರಿಚಯವೇ ಇಲ್ಲದವರೊಬ್ಬರು ಮುಗುಳ್ನಗೆ ಬೀರಿದಾಗ, ಆಗುವ ಭಾವನೆಯೇ ಬೇರೆ.
ಅಚ್ಚರಿಯಾದರೂ ನಮ್ಮ ಅಧರದಂಚಿನಲ್ಲಿ ಕಿರುನಗು ಮೂಡುತ್ತದೆ. ಈ ಹೊಸ ಭಾವನೆಯ ಉದಯ ನಮ್ಮಿಂದಲೇ ಆದರೆ ಎಷ್ಟು ಚೆನ್ನವಲ್ಲವೇ? ನೆಮ್ಮದಿಯ ಜೀವನಕ್ಕೆ ಸುಂದರವಾದ, ಸರಳವಾದ ವಿಧಾನವೆಂದರೆ ನಗು. ಹೌದು! ಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಾ ಒಮ್ಮೆ ನಿಮ್ಮೆಡೆಗೆ ನೀವೇ ಮುಗುಳ್ನಗಿ.
ನಂತರ ಆಗುವ ಪರಿಣಾಮವೇ ಬೇರೆ. ನಗು ನಗುತ್ತಾ ನಿಮ್ಮ ದಿನದ ಖಾತೆಯನ್ನು ತೆರೆಯಿರಿ. ಆ ಒಂದು ಮುಗುಳ್ನಗೆಯ ನೆನಪು ಬಡ್ಡಿ ಹಾಗೂ ಚಕ್ರಬಡ್ಡಿಯ ರೂಪದಲ್ಲಿ ನಿಮ್ಮ ಇಡೀ ದಿನವನ್ನು ಸಂತೋಷದಾಯಕವನ್ನಾಗಿ ಮಾಡಬಲ್ಲದು.
ನಗುವಿನಲ್ಲಿ ಬಹಳಷ್ಟು ವಿಧಗಳಿವೆ. ಮುಗುಳ್ನಗು, ನಸುನಗು, ಹುಸಿನಗು, ಅಟ್ಟಹಾಸದ ನಗು, ವ್ಯಂಗ್ಯದ ನಗು, ವಿಕಟನಗು – ಹೀಗೆ ಹಲವಾರು ರೀತಿಯ ನಗೆಯ ಬಗೆಗಳಿವೆ.
ಎಲ್ಲರ ಜೀವನವೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ನೋವು-ನಲಿವುಗಳ ವರ್ತುಲದಲ್ಲಿ ಸಿಕ್ಕಿ ಸುತ್ತುವುದೇ ಜೀವನ. ಬದುಕಿನಲ್ಲಿ ಸಂತೋಷ ಬಂದಾಗ ನಕ್ಕು ನಲಿದಾಡಿ, ದುಃಖವಾದಾಗ ಪ್ರಪಂಚವೇ ತಲೆ ಮೇಲೆ ಬಿದ್ದಿದೆಯೇನೋ ಎಂಬಂತೆ ಕೂರುವುದೇ ಜೀವನವಲ್ಲ. ದುಃಖವಾದಾಗಲೂ ಅದರಿಂದ ನಮ್ಮನ್ನು ಹೊರ ತರುವ ಶಕ್ತಿ ಇರುವುದು ನಗುವಿಗೆ ಮಾತ್ರ.
ಬೇಸರವಾದಾಗ ಹಳೆಯ ನೆನಪುಗಳನ್ನು ಹೊಕ್ಕು, ನಗುವಿನ ಕ್ಷಣಗಳನ್ನು ಹೆಕ್ಕಿ ತೆಗೆಯಿರಿ. ನಗುವಿನ ಸ್ಮರಣೆಯಿಂದಲೇ ಕಿರುದಾದ ನಗುವೊಂದು ನಮಗೆ ತಿಳಿಯದಂತೆಯೇ ಮುಖದ ಮೇಲೆ ಮೂಡುತ್ತದೆ. ಆ ನಗು ಕೃತ್ರಿಮವಾದರೂ ಸರಿ, ಮುಖದಲ್ಲಿ ಉಂಟಾಗುವ ಮಂಸಖಂಡಗಳ ಸಡಿಲತೆಯಿಂದ ಮನಸ್ಸಿನ ಕಿರಿ ಕಿರಿ ಕಡಿಮೆಯಂತೂ ಆಗುತ್ತದೆ.
ನಗು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ! ವಿಚಿತ್ರ ಎನಿಸಬಹುದು, ಆದರೂ ನಿಜ. ಅಪರಿಚಿತರಾದರೂ ಸರಿ, ಅವರೆಡೆಗೊಂದು ನಗು ಬೀರಿ.ಗೊಂದಲಗೊಂಡಾದರೂ ಅವರು ನಿಮ್ಮೆಡೆಗೆ ಮರುನಗು ಬೀರುತ್ತಾರೆ. ಸ್ವಲ್ಪವೂ ಖರ್ಚಿಲ್ಲದೆ, ದೇಹವನ್ನೂ ಮನಸ್ಸನ್ನೂ ಆರೋಗ್ಯಯುತವಾಗಿ ಇಡುವ ಸಾಮರ್ಥ್ಯ ನಗುವಿಗಿದೆ. ನಗುವುದರಿಂದ ಮುಖದ ಸ್ನಾಯುಗಳು ಸಡಿಲಗೊಂಡು ನರಮಂಡಲವನ್ನು ಶಾಂತಸ್ಥಿತಿಗೆ ತರುತ್ತದೆ. ನಗು ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಪೂರೈಸುತ್ತದೆ.
ಇದರಿಂದ ‘ಎಂಡಾರ್ಫಿನ್ಸ್’ ಎಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ‘ಎಂಡಾರ್ಫಿನ್ಸ್’ನಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ಖಿನ್ನತೆ ದೂರವಾಗುತ್ತದೆ. ‘ಎಂಡಾರ್ಫಿನ್ಸ್’ನ ಏರಿಕೆಯಿಂದ ಮತ್ತೊಂದು ರಾಸಾಯನಿಕವಾದ ’ಕಾರ್ಟಿಸಾಲ್’ನ ಉತ್ಪಾದನೆ ಕುಗ್ಗುತ್ತದೆ. ಒತ್ತಡಕ್ಕೊಳಗಾದಾಗ ಈ ‘ಕಾರ್ಟಿಸಾಲ್’ ಎನ್ನುವ ರಾಸಾಯನಿಕ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.
ಕೋಪಗೊಂಡಾಗ ನಮ್ಮ ದೇಹದಲ್ಲಿ ಬಳಕೆಯಾಗುವ ಮಾಂಸಖಂಡಗಳ ಶಕ್ತಿಗಿಂತ, ಅರ್ಧದಷ್ಟು ಮಾಂಸಖಂಡಗಳ ಉಪಯೋಗ ನಾವು ನಕ್ಕಾಗ ಆಗುತ್ತದೆ. ಯೋಚಿಸಿ ನೋಡಿ, ಮುನಿಸು ಹಿತವೋ ಅಥವಾ ಮಂದಸ್ಮಿತವೋ?
ನಗು ಶಾಂತಿಯ ಸಂಕೇತ. ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾದಾಗ, ಮಾತಿಗೂ ಮುಂಚೆ ಶುರುವಾಗುವುದು ನಗುವಿನ ಸಂವಾದ! ಪದಗಳಿಲ್ಲದ ಸಂಭಾಷಣೆಯೇ ನಗು.ನಗುವಿಗೆ ಭಾಷೆಯ ಹಂಗಿಲ್ಲ. ಸಂಭಾಷಣೆಗೆ ರಹದಾರಿಯೇ ಮಂದಹಾಸ. ನಗು ಮೊಗದಿಂದ ಮಾತನಾಡುವವರು ಅಪರಿಚಿತರಾದರೂ ಅವರೊಂದಿಗೆ ಗೊಂದಲ, ತಳಮಳವಿಲ್ಲದೆ ಮಾತನಾಡಬಹುದು.
ಅದೇ ಗಂಭೀರ ಪ್ರವೃತ್ತಿಯುಳ್ಳವರು ಪರಿಚಿತರೇ ಆದರೂ ಅವರೊಂದಿಗೆ ಸಲೀಸಾಗಿ ಮಾತುಕತೆ ಸಾಧ್ಯವಿಲ್ಲ. ಒಂದು ಸಣ್ಣ ಮಂದಹಾಸದಿಂದ ಎಂತಹ ದ್ವೇಷವನ್ನಾದರೂ ಹತ್ತಿಕ್ಕಬಹುದು. ಮನಸ್ಸು ಅಶಾಂತಿಯ ಗೂಡಾಗಿದ್ದಾಗ, ನಮ್ಮಲ್ಲಿ ನಗೆಯ ಬುಗ್ಗೆಯನ್ನುಕ್ಕಿಸಿ ಮನಸ್ಸಿಗೆ ನೆಮ್ಮದಿ ತಂದುಕೊಟ್ಟವರು ಪ್ರಮುಖರಾಗುತ್ತಾರೆ. ಅಲ್ಲಿ ಬೇಸರದ ಕಾರಣ ಗಣನೆಗೆ ಬರುವುದಿಲ್ಲ. ಎಂತಹ ನೋವನ್ನಾದರೂ ಮರೆಸುವ ಶಕ್ತಿ ಒಂದು ಸಣ್ಣ ನಗುವಿಗಿದೆ. ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸುವುದು ಸುಲಭವಲ್ಲ.
ಬೇರೊಬ್ಬರನ್ನು ಅಳಿಸಿದಷ್ಟು ಬೇಗ ನಗಿಸಲು ಸಾಧ್ಯವಿಲ್ಲ. ತುಟಿಯಂಚಿನಲ್ಲಿ ಮೂಡುವ ಸಣ್ಣ ತಿರುವಿಗೆ ಮಂಕುತನವನ್ನು ತೊಲಗಿಸಿ ಉಲ್ಲಾಸದಾಯಕವನ್ನಾಗಿ ಮಾಡುವ ಶಕ್ತಿಯಿದೆ. ನಗು ನಗುತ್ತಾ ಇರುವವರೆಲ್ಲಾ ಸದಾ ಕಾಲ ಸಂತೋಷದಿಂದಿರುತ್ತಾರೆಂದಲ್ಲ. ನಗುವಿನ ಹಿಂದಿರುವ ನೋವನ್ನು ಮರೆಮಾಚಲು ಎಷ್ಟೋ ಜನ ನಗುವಿನ ಮುಖವಾಡವನ್ನು ಹಾಕಿಕೊಂಡಿರುತ್ತಾರೆ.
ತಮ್ಮ ನೋವಿನ ಬಾಧೆ ಬೇರೆಯವರಿಗೆ ತಟ್ಟದಂತೆ ನೋಡಿಕೊಳ್ಳುವುದು ಅವರ ಉದ್ದೇಶ. ಒಬ್ಬ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಅದು ಆತನ ಸದ್ಯದ ಪ್ರಾಪಂಚಿಕ ಸ್ಥಿತಿಯನ್ನೇ ಬದಲಾಯಿಸಿ ಬಿಡುತ್ತದೆ. ನಿಮ್ಮ ನಗುವಿನಿಂದ ಬೇರೆಯವರ ಪರಿಸ್ಥಿತಿಯನ್ನು ಬದಲಾಯಿಸಿ. ಆದರೆ ಮತ್ತೊಬ್ಬರ ಕಾರಣದಿಂದ ನಿಮ್ಮ ನಗುವನ್ನು ಮಾಸಲು ಬಿಡಬೇಡಿ.
ಮುಗುಳುನಗೆಯಿಂದ ಕೂಡಿದ ಮುಖ ಯಾವಾಗಲೂ ಸುಂದರವಾಗಿ ಕಾಣುತ್ತದೆ ಎಂಬುದನ್ನು ನೆನಪಿಡಿ. ಎಷ್ಟೇ ಸಿಂಗರಿಸಿಕೊಂಡರೂ ಮುಖದಲ್ಲಿ ಪುಟ್ಟದೊಂದು ಮಂದಹಾಸವಿಲ್ಲದಿದ್ದರೆ, ಅಲಂಕಾರ ಪೂರ್ಣವಾಗುವುದಿಲ್ಲ. ಇಂಗ್ಲಿಷ್‌ನ ನಾಣ್ನುಡಿಯೊಂದು ಹೇಳುವಂತೆ ‘ಅತಿ ಸುಂದರವಾದ ಆಭರಣವೆಂದರೆ ನಗು’. ಎಂತಹ ಕೆಟ್ಟ ಮನಃಸ್ಥಿತಿಯಾದರೂ ಅದನ್ನು ಬದಲಾಯಿಸುವ ಸಾಮರ್ಥ್ಯ ನಗುವಿಗಿದೆ.
ಸಾಮಾನ್ಯವಾಗಿ ಸಂದರ್ಭ ಯಾವುದಾದರೂ ಮನಸ್ಸಿಗೆ ಮೊದಲು ಬರುವುದು ಕೆಟ್ಟ ಆಲೋಚನೆಗಳೇ! ಮಾನವನ ಮೆದುಳು ಯಾಂತ್ರಿಕವಾಗಿ ನಕಾರಾತ್ಮಕ ಚಿಂತನೆಗಳತ್ತ ವಾಲಿಬಿಟ್ಟದೆ. ನಿತ್ಯಜೀವನದಲ್ಲಿ ಸತತ ಅಭ್ಯಾಸದಿಂದ ನಗುವನ್ನು ರೂಢಿಸಿಕೊಂಡಲ್ಲಿ, ಮನಸ್ಸು ಸಕಾರಾತ್ಮಕ ಚಿಂತನೆಗಳತ್ತ ಹೆಚ್ಚು ಒಲವು ತೋರಲು ಪ್ರಾರಂಭಿಸುತ್ತದೆ. ನೀವು ನಗುವಿನ ಉಪಯೋಗ ಮಾಡಿಕೊಳ್ಳದಿದ್ದರೆ, ಅದು ಚೆಕ್‌ಬುಕ್ ಇಲ್ಲದ ನಿಮ್ಮ ಬ್ಯಾಂಕಿನಲ್ಲಿರುವ ಹಣಕ್ಕೆ ಸಮ!
ಮನಸ್ಸಿನ ಭಾವನೆಗಳು ಯಾವುದೇ ರೂಪದಲ್ಲಿದ್ದರೂ ಅದನ್ನು ಒಳ್ಳೆಯ ಸ್ಥಿತಿಗೆ ತರಲು ಇರುವ ಸರಳ ಉಪಾಯವೆಂದರೆ ಒಂದು ನಸುನಗು. ಮುಖದ ಮೇಲಿರುವ ಹುಬ್ಬಿನ ಗಂಟನ್ನು ಸಡಿಲಿಸಿ ತುಟಿಯಂಚಿನಲ್ಲಿ ಕಿರು ನಗುವೊಂದನ್ನು ತೇಲಿ ಬಿಡಿ. ನಂತರ ನೋಡಿ ಜಾದು! ಈ ವಿಧಾನ ಎಷ್ಟು ಸುಲಭವಲ್ಲವೇ? ಪ್ರಯತ್ನಿಸಿ ನೋಡಿ. ನೀವೂ ನಕ್ಕು, ಮತ್ತೊಬ್ಬರನ್ನೂ ನಗಿಸಿ.
ಇಂದ: ಶ್ರೀ ರಾಜೇಶ ಎನ್ ನಾಗೂರೆ MSc.MEd ಸ.ಶಿ KPS ಅವರಾದ ( ಬಿ) ಕಲಬುರಗಿ
Karnataka Public School Aurad(B) Science Practical Class
Subscribe to:
Posts (Atom)
SSLC Key Answers Objection Entry Science world R Nagure
https://kseeb.karnataka.gov.in/objectionentry/SSLC_KeyAnswers
Popular post
-
SSLC ALL CHAPTERS LINK
-
ಸಾಮಾನ್ಯ ವಿಜ್ಞಾನ : 1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? * *ಜಲಜನಕ.* 2) ಅತಿ ಹಗುರವಾದ ಲೋಹ ಯಾವುದು? * *ಲಿಥಿಯಂ.* 3) ಅ...
-
ಹತ್ತನೇ ವಿಜ್ಞಾನ ವಿಷಯದ ಬಹು ಆಯ್ಕೆ ಮಾದರಿ ಪ್ರಶ್ನೆಗಳು ಗೂಗಲ್ ಡಾಕ್ಸ https://forms.gle/yYLSQGM599EePXiMA