“ಕಾಯಕವೇ ಕೈಲಾಸ” (Work is Workship) ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇಬೇಕು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ಕೆಲಸವೇ ಪೂಜೆ, ಕೆಲಸವೇ ದೇವರು. ಕೆಲಸದಲ್ಲಿಯೇ ಕೈಲಾಸವನ್ನು ಕಾಣಬೇಕೆಂದು ಹೇಳಿದವರು ಜಗಜ್ಯೋತಿ ಬಸವೇಶ್ವರರು._ _ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿದರು._ _ಇಂಗಳೇಶ್ವರ ಬಾಗೇವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯ ಮಗನಾಗಿ ಆನಂದನಾಮ_ ಸಂವತ್ಸರದಲ್ಲಿ _ವೈಶಾಖಮಾಸದ ಅಕ್ಷಯ ತೃತೀಯದಂದು ಏಪ್ರಿಲ್ 30 1134 ರೋಹಿಣ ನಕ್ಷತ್ರದಲ್ಲಿ ಜನಿಸಿದರು. ಯಾವುದೇ_ _ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು-ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಹೋದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ,_ _ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಎಲ್ಲ ದೇವರನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ ಪ್ರಾಣ ಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವಾದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟ ಲಿಂಗದ ಪರಿಕಲ್ಪನೆ ನೀಡಿದರೂ, ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನಾಗಬೇಕು._ _ನವ ಸಮಾಜ ನಿರ್ಮಾಣದ ರೂಪುರೇಷಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು_ _ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಾಂಬಿಕೆಯನ್ನು ವಿವಾಹವಾಗಿ ಕರಣ ಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ ಪ್ರಧಾನಿ (ದಂಡನಾಯಕ) ಯಾಗಿ ಕಾರ್ಯ ನಿರ್ವಹಿಸಿದರು._ _ಬಸವ ಕಲ್ಯಾಣದಲ್ಲಿ ಬಸವಣ್ಣನವರು ಶರಣರ ಜೊತೆ ಸೇರಿ ಅನುಭವ ಮಂಟಪ_ _ಸ್ಥಾಪಿಸಿದರು. ಅನುಭವ ಮಂಟಪವು ವಿಶ್ವ ಮಾನವ ಸಂದೇಶ ಮತ್ತು ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿದೆ_ . _ಅನುಭವ ಮಂಟಪದಿಂದ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ_ _ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು._
_ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸವೆಂದು ಸಾರಿದರು. ಅಸ್ಪ್ರಶ್ಯತೆಯ ಹೆಸರಿನಲ್ಲಿ ಊರ ಹೊರಗೆ ಇರಿಸಲಾದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದರು_ . _ದೇವಾಲಯ, ಕುಡಿಯುವ ನೀರಿನ ಬಾವಿ-ಕೆರೆಗಳನ್ನು ಬಳಸಲು ಇವರಿಗೂ ಸಮಾನ ಹಕ್ಕಿದೆಯಂದು ತೋರಿಸಿದರು._ _“ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ”_ _ಎಂದು ಬಸವಣ್ಣನವರು ಪುರೋಹಿತಶಾಹಿ ವ್ಯವಸ್ಥೆ ಮತ್ತು ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ_ _ಶೋಷಣೆಯನ್ನು ಖಂಡಿಸಿದ್ದರು. ಬ್ರಾಹ್ಮಣ ಸಮಾಜದ ಶರಣರಾದ ಮಧುವರಸರ ಮಗಳನ್ನು ಸಮಗಾರ ಸಮಾಜದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು._ _ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ಧ ಪ್ರೇರೇಪಿಸಿ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನ ಮಾಡಿ ಅವರು ವರ್ಣಾಂತರ_ _ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ._ _ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣ, ವೀರ ಗಣಾಚಾರಿ, ಮಡಿವಾಳ, ಮಾಚಯ್ಯನವರು ವೀರಾಗ್ರಣ ಗಳಾಗಿ ಕಾದಾಡಿ ವಚನ ಸಾಹಿತ್ಯ ನಿಧಿಯನ್ನು ಉಳಿಸಿಕೊಟ್ಟರು._ _ಇದೇ ಸಮಯದಲ್ಲಿ ಚೆನ್ನಬಸವಣ್ಣನವರು ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಬಂದು ನೆಲೆಸಿದರು._
_ಬಸವಣ್ಣನವರು 1196 ರಲ್ಲಿ ಕೂಡಲಸಂಗಮಕ್ಕೆ ಮರಳಿ ಬಂದರು. 7 ಜುಲೈ 1196 ನಳನಾಮ ಸಂವತ್ಸರದ_ _ಶ್ರಾವಣ ಶುದ್ಧ ಪಂಚಮಿಯಂದು ಉರಿಯುಂಡ ಕರ್ಪೂರದಂತೆ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಯೇ ಇದೆ._ _ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನೀರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ._
REPORT THIS AD
_ಬಸವಣ್ಣನವರ ತತ್ವಗಳು:-_
_ದೇವನೊಬ್ಬ ನಾಮ ಹಲವು ನಮ್ಮನ್ನೆಲ್ಲ ಸೃಷ್ಟಿಸಿದ ದೇವರು ಒಬ್ಬನೇ, ಮಾನವನಿಗೆ ಯಾವುದೇ ರೀತಿ_ _ಜಾತಿಕುಲಗಳಿಲ್ಲ ಮಾನವ ಜಾತಿ ಒಂದೇ. ಸ್ವರ್ಗ-ನರಕಗಳು ಬೇರಿಲ್ಲ :- ಪಾಪ-ಪುಣ್ಯ ಫಲವಾಗಿ ಸ್ವರ್ಗ-ನರಕಗಳು ಬೇರಿಲ್ಲ, ಅಯ್ಯಾ ಎಂದೊಡಿ ಸ್ವರ್ಗ, ಎಲವೇ ಎಂದರೆ ನರಕ, ಆಚಾರವೇ ಸ್ವರ್ಗ,_ ಅನಾಚಾರವೇ ನರಕ, ಸತ್ಯ _ನುಡಿವುದೇ ದೇವಲೋಕ ಮಿಥ್ಯ ನುಡಿಯುವುದೇ ಮೃತ್ರ್ಯಲೋಕ ಎಂದು ತಿಳಿಸಿದರು. ದಯವೇ ಧರ್ಮದ ಮೂಲ_ :- _ಯಾವುದೇ ಧರ್ಮದ ಮೂಲ ದಯೆ ದಯವಿಲ್ಲದ ಧರ್ಮ ಅದಾವುದಯ್ಯ? ದಯವಿರಬೇಕು ಸಕಲ ಪ್ರಾಣ ಗಳೆಲ್ಲರಲ್ಲಿ ಎಂದು ತಿಳಿಸಿ ಹಿಂಸಾಚಾರವನ್ನು ತಡೆಗಟ್ಟಿದರು._
_ಕಾಯಕವೇ ಕೈಲಾಸ :-_ _ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇ ಬೇಕಾಗುವುದು. ಅದರಲ್ಲಿಯೇ ದೇವರನ್ನು ಕಾಣ ರೋ ಎಂದರು._ _ಸಮತಾವಾದ :- ನಮ್ಮ ದೇಶದಲ್ಲಿ 12 ನೇ ಶತಮಾನದಲ್ಲಿ ಸಮತಾವಾದದ ಬೀಜ ಬಿತ್ತಿದ ಪ್ರಥಮ ವ್ಯಕ್ತಿ_ _ಎಂದರೆ ಶ್ರೀ ಬಸವಣ್ಣನವರು. ಜಾತಿ ಪದ್ಧತಿಗಳು ಕೇವಲ ಉದ್ಯೋಗದಿಂದ ಹುಟ್ಟಿ ಬಂದವುಗಳು, ಅವುಗಳನ್ನು ನಾವೇ ಮಾಡಿಕೊಂಡಿದ್ದೇವೆ. ಆದರೆ ಮಾನವ ಜಾತಿ ಒಂದೇ._
_ಬಸವಣ್ಣನವರ ಶೈಕ್ಷಣ ಕ ವಿಚಾರಗಳು :-_
ಪ್ರತಿಯೊಬ್ಬರು ಕಲಿಯುವಂತಾಗಬೇಕು, ಮೂಢ ನಂಬಿಕೆಗಳನ್ನು ಬಿಡುವುದು, ಕಾಯಕದ ಮಹತ್ವ, ಸಮಾನತೆ, ಸ್ತ್ರೀ ಶಿಕ್ಷಣ ನೈತಿಕತೆ ಸಮಾಜದ ಜನರು ಒಳ್ಳೆಯವರಾದರೆ ಉತ್ತಮ ಸಮಾಜ ಕಟ್ಟಬಹುದೆಂದು ತೋರಿಸಿಕೊಟ್ಟರು._
_“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ”ಎಂದು ಜಗಜ್ಯೋತಿ ಬಸವಣ್ಣನವರು ಹೇಳಿದರು.
****
ಜನನ ಜನವರಿ ೨೩,೧೮೯೭,ಕಟಕ್, ಒರಿಸ್ಸಾ
ಮರಣ ಆಗಸ್ಟ್ ೧೮, ೧೯೪೫
ಟೈಪೈ, ಟೈವಾನ್ (ಸಂಭಾವಿತ)
ಮರಣದ ಕಾರಣ ವಿಮಾನ ಅಪಘಾತ (ಸಂಭಾವಿತ)
ಇದಕ್ಕೆ ಪ್ರಸಿದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ರಾಷ್ಟ್ರೀಯ ಸೇನೆ
ಶೀರ್ಷಿಕೆ ನೇತಾಜಿ, ಆಜಾದ್ ಹಿಂದ್ ಮುಖ್ಯಸ್ಥ
ರಾಜಕೀಯ ಪಕ್ಷ ಫಾರ್ವರ್ಡ್ ಬ್ಲಾಕ್
ಧರ್ಮ ಹಿಂದು
ಸಂಗಾತಿ(ಗಳು) ಎಮಿಲಿ ಶೆಂಕ್ಲ್
ಮಕ್ಕಳು ಅನಿತ ಬೋಸ್ ಫಾಫ್.
ಸುಭಾಷ್ ಚಂದ್ರ ಬೋಸ್ (সুভাষ চন্দ্র বসু; ಜನನ: ಜನವರಿ ೨೩, ೧೮೯೭ — ಮರಣ (ಸಂಭಾವಿತ): ಆಗಸ್ಟ್ ೧೮, ೧೯೪೫) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.
●ಜನನ, ಜೀವನ
ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೯ ಮಕ್ಕಳಲ್ಲಿ ಸುಭಾಷ್ ೬ನೇ ಯವರು.ಕಟಕ್‌ನಲ್ಲಿ ರ‍್ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
●ರಾಷ್ಟ್ರ ನಿರ್ಮಾಣದ ಜವಾಬ್ದಾರಿ.
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.
ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.
●ಸ್ವರಾಜ್ಯಪಕ್ಷ ಸ್ಥಾಪನೆ
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.
೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ.
ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
●ರಾಜಕೀಯ ಅನುಭವ-ಒಳನೋಟ
ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ.
ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ.
’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ!
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ.
●ಆಜಾದ್ ಹಿಂದ್ ಸೇನೆ.
ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ).
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.
ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.
***
ಆರಾಧನೆ: ಪ್ರೋ.ಕೆ. ಖಂಡೋಬ
ಫೆಬ್ರವರಿ 15, 2018 ಮಹಾ ಸಂತ ಶ್ರೀ ಸೇವಾಲಾಲರ 279ನೇ ಜಯಂತಿ. ಕರ್ನಾಟಕ ಸರಕಾರ ಈ ಮಹಾಸಂತನ ಜಯಂತಿಯನ್ನು ಕರ್ನಾಟಕದಾದ್ಯಂತ ಮೊಟ್ಟಮೊದಲ ಬಾರಿಗೆ ಸರಕಾರದ ವತಿಯಿಂದ ಆಚರಿಸುತ್ತಿದ್ದು, ತನ್ನಿಮಿತ್ತ ಈ ಲೇಖನ, ಲೋಕಕಲ್ಯಾಣಕ್ಕಾಗಿ ಈ ಭರತ ಭೂಮಿಯಲ್ಲಿ ಹಲವು ಜನ ಸಾಧು-ಸಂತರು, ಸತ್ಪುರುಷರು, ಮೇಧಾವಿಗಳು, ದಾರ್ಶನಿಕರು, ಬುದ್ಧಿಜೀವಿಗಳು ಮತ್ತು ತ್ಯಾಗಿಗಳು ಅವತರಿಸಿದ್ದಾರೆ. ಜನತೆಯಲ್ಲಿನ ಜಾತಿಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಆಯಾ ಕಾಲಘಟ್ಟದಲ್ಲಿ ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಟ ಮಾಡಿದ್ದಾರೆ.
ಸೇವಾಲಾಲನ ಜನನ, ಮರಣ, ಜೀವನ, ಸಾಧನೆ, ಹೋರಾಟಗಳ ಹಿನ್ನೆಲೆಯಲ್ಲಿ ಲಂಬಾಣಿ ಮೌಖಿಕ ಪರಂಪರೆಯಲ್ಲಿ ಹಲವು ಐತಿಹ್ಯ ಕಥೆ ಪುರಾಣಗಳು ಹುಟ್ಟಿಕೊಂಡಿವೆ. ಇವುಗಳು ಸೇವಾಲಾಲನ ವಾಸ್ತವ ಸಂಗತಿಗಳಿಗಿಂತ ಹೆಚ್ಚಾಗಿ ಅವನನ್ನು ಒಬ್ಬ ಪೌರಾಣಿಕ ವ್ಯಕ್ತಿಯನ್ನಾಗಿ ಚಿತ್ರಿಸಿ ದೈವತ್ವಕ್ಕೆ ಏರಿಸಿವೆ. ವಾಸ್ತವವಾಗಿ ಸೇವಾಲಾಲ ತಮ್ಮ ಜೀವಿತ ಕಾಲಾವಧಿಯಲ್ಲಿ ತನ್ನನ್ನು ನಂಬಿದ ಒಂದು ಜನಾಂಗದ ತನ್ನದೆಲ್ಲವನ್ನೂ ಧಾರೆ ಎರೆದ ಒಬ್ಬ ಮಹಾಸಂತನೆಂಬುದು ಸತ್ಯ. ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು, ತನ್ನ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕ. ಅಧ್ಯಾತ್ಮದ ಮೂಲಕವಾಗಿ ಜನಾಂಗಕ್ಕೆ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕ. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಐಕ್ಯತೆ ಯನ್ನುಂಟುಮಾಡಿರುವುದು ಸ್ಪಷ್ಟ.
ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯಗಳೇ ಕಾರಣವಾಗಿವೆ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಒಬ್ಬ ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ. ಸೇವಾಲಾಲರು ಹುಟ್ಟಿನಿಂದಲೇ ದೈವಾಂಶ ಸಂಭೂತ. ಆತನ ಚರಿತ್ರೆ, ಪವಾಡ, ಅವತಾರ, ಮೊದಲಾದವುಗಳನ್ನು ಲಂಬಾಣಿಗಳು ತಮ್ಮ ಭಜನೆಗಳಲ್ಲಿ ದಿನಗಟ್ಟಲೆ, ವಾರಗಟ್ಟಲೇ ಹಾಡುತ್ತಾರೆ. ಸೇವಾಲಾಲರ ಕಾಲ, ಜನನ, ವೃತ್ತಾಂತ, ಮರಣ ಮತ್ತು ಬದುಕಿನ ಬಗೆಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಚಾರಿತ್ರಿಕ ಆಧಾರಗಳು ಇಲ್ಲದ್ದರಿಂದ ಯಾವುದೇ ಖಚಿತವಾದ ಮಾಹಿತಿಗಳು ದೊರೆಯುವುದಿಲ್ಲ. ಅವರ ಕಥನ ಗೀತೆಗಳು, ಲಾವಣಿಗಳು, ಭಜನೆ-ಗೀತೆ ಹಾಗೂ ಕೆಲವು ಭೌಗೋಳಿಕ ಆಧಾರಗಳನ್ನು ಆಧರಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪವೇ ಸೇವಾಲಾಲರ ಜನ್ಮಸ್ಥಳವೆಂದು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಕಂಡುಬರುವ ಝುಮ್ರಿ ಝೋಲ್, ಭೂರಿಪಟಾರ್, ಚಂದನಖೋಳಿ, ಕಾಳೋಕೂಂಡೋ, ಕಿಂಚೇರ್ ಗುಂಡಿ, ಬನದವ್ವನ ಗುಡಿ ಮತ್ತು ಗೊಲ್ಲನಮಟ್ಟಿ ಮೊದಲಾದ ಸ್ಥಳಗಳು ಅವರ ಲಾವಣಿಗಳಲ್ಲಿ ಸ್ಪಷ್ಟವಾಗಿ ದಾಖಲಾಗಿರುವುದರಿಂದ ಸೂರಗೊಂಡನಕೊಪ್ಪ ಪ್ರದೇಶವೇ ಸೇವಾಲಾಲರ ಜನ್ಮಸ್ಥಳ ಆಗಿರುವುದರಲ್ಲಿ ಯಾವ ಸಂದೇಹಗಳು ಇರಲಾರವು.
ಭೀಮಾ ನಾಯಕ ಹಾಗೂ ಧರ್ಮಿಣಿ ಬಾಯಿಗೆ ಮದುವೆ ಮಾಡುತ್ತಾರೆ. ಮದುವೆಯಾಗಿ 12 ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗುವುದಿಲ್ಲ. ಈ ದಂಪತಿಗಳಿಬ್ಬರೂ ಜಗನ್ಮಾತೆಯ ಭಕ್ತಿಸೇವೆಯಲ್ಲಿ ಸುಖ-ಸಂತೋಷದಿಂದ ಬದುಕು ಸಾಗಿಸುತ್ತಿದ್ದರು. ಸಂತಾನ ಪ್ರಾಪ್ತಿಗಾಗಿ ಕಂಡ ಕಂಡ ದೇವರು-ದೇವತೆಗಳಿಗೆ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಕೊನೆಗೆ, ಜಗದಂಬೆಯನ್ನೇ ನಂಬಿಕೊಂಡು ಅವಳ ಭಕ್ತಿಯಲ್ಲಿ ಕಾಲ ಕಳೆಯುತ್ತಾ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪವನ್ನು ಮಾಡಿ ಭೀಮಾ ನಾಯಕರು ಘೋರವಾದ ತಪಸ್ಸನ್ನು ಕೈಗೊಳ್ಳುತ್ತಾನೆ. ಕೊನೆಗೆ ಶಿವ-ಪಾರ್ವತಿಯ ಕರುಣೆಯಿಂದ ಸಂತಾನ ಭಾಗ್ಯವನ್ನು ಈ ನಡುವೆ ತಮಗೆ ಮಗುವಾದರೆ ಭಕ್ತಿಯ ಹೆಸರಲ್ಲಿ ನಿನಗೆ ಒಪ್ಪಿಸುತ್ತೇವೆ ಎಂದು ಮರಿಯಮ್ಮನಲ್ಲಿ ಹರಕೆ ಹೊತ್ತಿರುತ್ತಾರೆ. ಹೀಗೆ ಹುಟ್ಟಿದ ಮಗು ಸಾಮಾನ್ಯ ಮಗುವಾಗಿರಲಿಲ್ಲ. ಅವನೊಬ್ಬ ಸತ್ಪುರುಷನಾಗಿದ್ದ. ಮಾಣಿಕ್ಯದಂತಹ ಮಗುವಿಗೆ ಸಾಕ್ಷಾತ್ ಮಾತೆ ಜಗದಂಬೆಯೇ ಮಾರುವೇಷದಲ್ಲಿ ಬಂದು, ಸೇವಾಭಾಯಾ, ಸೇವಾಲಾಲ ಎಂದು ನಾಮಕರಣ ಮಾಡುತ್ತಾಳೆ.
ಆ ಮಗು ಶಿವನ ಅವತಾರಿಯಾಗಿದ್ದು, ದೇವಿಯ ಭಕ್ತನಾಗಿದ್ದಾನೆ. ಆತನು ಬಂಜಾರ ಕುಲದ ವಂಶೋದ್ಧಾರಕನಾಗಿದ್ದು, ದುಷ್ಟರನ್ನು ಸಂಹರಿಸಿ, ಶಿಷ್ಟರ ರಕ್ಷಣೆ ಮಾಡುವನೆಂದು ಜಗದಂಬೆ ಹೇಳಿ, ಅಲ್ಲಿಂದ ಕಾಲಚಕ್ರ ಗತಿಸಿ ಸೇವಾಲಾಲನಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತ್ತನ್ನು ಈಡೇರಿಸಬೇಕೆಂದು ಧರ್ಮಿಣಿ ಬಾಯಿಯ ಕನಸಿನಲ್ಲಿ ಬಂದು ಸೇವಾಲಾಲನನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಅದಕ್ಕೆ ಧರ್ಮಿಣಿಯು ಒಪ್ಪದೇ ಹೋದಾಗ ನೇರವಾಗಿ ಸೇವಾಲಾಲನನ್ನು ತನ್ನ ಭಕ್ತನಾಗಬೇಕೆಂದು, ತನ್ನ ಜತೆಗೆ ಬರಬೇಕೆಂದು ಕೇಳಿದಾಗ ಅವನೂ ಭಕ್ತನಾಗಲು ತಿರಸ್ಕರಿಸುತ್ತಾನೆ. ತಾನು ಪರಮಾತ್ಮನ ಸೇವಕನೆಂದು, ಮರಿಯಮ್ಮಳ ಸೇವೆ ಮಾಡಲಾರನೆಂದು ಹಠ ಹಿಡಿಯುತ್ತಾನೆ. ಇದರಿಂದ ಅವಮಾನಿತಳಾದ ಮರಿಯಮ್ಮ ಸೇವಾಲಾಲನ ಕುಟುಂಬದ ಸರ್ವಸ್ವವನ್ನು ನಾಶ ಮೂಲಕ ಪರಿಪರಿಯಾಗಿ ಕಾಡಿಸುತ್ತಾಳೆ. ಇದರಿಂದ ಹತಾಶನಾದ ಸೇವಾಭಾಯಾ ಅನಿವಾರ್ಯವಾಗಿ ಜಗನ್ಮಾತೆಯ ಭಕ್ತನಾಗಲು ಒಪ್ಪಿಕೊಳ್ಳುತ್ತಾನೆ.
ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮುಂದೆ ಸಮುದಾಯದಲ್ಲಿ ಜಗನ್ಮಾತೆಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಾನೆ. ಜನರು ಮರಿಯಮ್ಮನನ್ನು ಮರೆತು ಸೇವಾಲಾಲನನ್ನೇ ಪೂಜಿಸುವಂತೆ ಮಹಾನ್ ಸಾಧಕನಾಗಿ ಮೆರೆಯುತ್ತಾನೆ. ತನ್ನ ಜನಸಮುದಾಯದ ಏಳಿಗೆಗಾಗಿ ಶ್ರಮಿಸಿ, ಅವರ ಬದುಕನ್ನು ಹಸನುಗೊಳಿಸಲು ನಿರಂತರವಾಗಿ ಹೋರಾಡುತ್ತಾನೆ. ಮರಿಯಮ್ಮಳಿಂದ ಮೊದಲೇ ವರವನ್ನು ಪಡೆದುಕೊಂಡಿದ್ದ ಸೇವಾಲಾಲ ತನ್ನ ಭಕ್ತರು ಕೇಳಿದ ವರಗಳ ತಕ್ಷಣವೇ ಈಡೇರಿಸಿ ಪ್ರಖ್ಯಾತಿಯನ್ನು ಪಡೆದುಕೊಂಡನು. ಈತನ ಜನಪ್ರಿಯತೆಯನ್ನು ಕಂಡು ಮರಿಯಮ್ಮ ಸಹಿಸಲಾರದೇ ಅವನು ಬ್ರಹ್ಮಚಾರಿಯಾಗಿರುವುದರಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿರವನೆಂದು ಬಗೆದು, ಅವನಿಗೆ ಮದುವೆ ಮಾಡಿಸುವ ಮೂಲಕ ಆತನ ಜನಪ್ರಿಯತೆಯನ್ನು ಕುಗ್ಗಿಸಬೇಕೆಂದು ನಿರ್ಧರಿಸುತ್ತಾಳೆ. ಅಂತೆಯೇ, ಸೇವಾನ ಬಳಿಗೆ ಬಂದು ಮದುವೆಯಾಗುವಂತೆ ಅವನನ್ನು ಒತ್ತಾಯಿಸುತ್ತಾಳೆ. ಅದಕ್ಕೆ ಒಪ್ಪಿಕೊಳ್ಳದ ಸೇವಾಲಾಲ ತಾನು ಸಮಸ್ತ ಸಮುದಾಯದವರಿಗೆ ‘‘ಭಾಯಾ’’ (ಸಹೋದರ) ಆಗಿರುವುದರಿಂದ ನಾನು ಯಾರೊಂದಿಗೆ ಮದುವೆಯಾಗಲೆಂದು ವಾದಿಸುತ್ತಾನೆ.
ಎಲ್ಲಾ ನಾರಿಯರು ನನಗೆ ಸಹೋದರಿಯರು ಆಗಿರುವುದರಿಂದ ಈ ಮದುವೆ ಅಲ್ಲಗಳೆಯುತ್ತಾನೆ. ಆಧ್ಯಾತ್ಮ ಜೀವಿಯಾಗಿ ಸಾಧಕನಾಗಿದ್ದ ಸೇವಾಭಾಯಾ ಮರಿಯಮ್ಮನ ಮಾತನ್ನು ತಿರಸ್ಕರಿಸುತ್ತಾನೆ. ಮರಿಯಮ್ಮ ಅವಮಾನಿತಳಾಗಿ ಮತ್ತೆ ಮತ್ತೆ ಒತ್ತಾಯಿಸಿದಾಗ, ಬ್ರಹ್ಮನು ತನ್ನ ಹಣೆಬರಹದಲ್ಲಿ ಮದುವೆಯಾಗುವುದನ್ನು ಬರೆದಿಲ್ಲವಾದ್ದರಿಂದ ಮದುವೆಯಾಗುವುದಾದರೂ ಹೇಗೆ ? ಎಂದು ಪ್ರಶ್ನಿಸುತ್ತಾನೆ. ಹಾಗಾದರೆ, ನಿನ್ನ ಹಣೆಯ ಬರಹವನ್ನು ಪರೀಕ್ಷಿಸಲು ದೇವಲೋಕಕ್ಕೆ ಹೋಗೋಣವೆಂದು ಅವನನ್ನು ಕರೆಯುತ್ತಾಳೆ. ಅದಕ್ಕೆ ಸಮ್ಮತಿಸಿದ ಸೇವಾಭಾಯಾ ಮರಿಯಮ್ಮನೊಂದಿಗೆ ದೇವಲೋಕಕ್ಕೆ ಹೋಗಲು ಅಣಿಯಾಗುತ್ತಾನೆ. ಸೇವಾ ಭಾಯಾ ತಾನು ಸ್ವರ್ಗಲೋಕಕ್ಕೆ ತನ್ನ ಹಣೆಯ ಬರಹವನ್ನು ಕೇಳಲು ಬ್ರಹ್ಮನಲ್ಲಿಗೆ ಹೋಗುವ ಪ್ರಸ್ತಾಪಿಸಿ, ತನ್ನ ಶರೀರವನ್ನು ದೇವಸ್ಥಾನದಲ್ಲಿಟ್ಟು, ಬೇವಿನ ಸೊಪ್ಪಿನಲ್ಲಿ ಮುಚ್ಚಿಡಬೇಕೆಂದು, ತಾನು ಹಿಂದಿರುಗಿ ಬರುವವರೆಗೆ ನಿರಂತರವಾಗಿ ಭಜನೆ ಮಾಡುತ್ತಿರಬೇಕೆಂದು, ಬೇವಿನ ಸೊಪ್ಪಿನಲ್ಲಿರುವ ನನ್ನ ಶರೀರವನ್ನು ಅಪ್ಪಿ-ತಪ್ಪಿಯೂ ಯಾರೂ ಮುಟ್ಟಬಾರದೆಂದು ತನ್ನ ಬಂಧು-ಬಾಂಧವರಿಗೆಲ್ಲಾ ತಿಳಿಸಿ, ಸ್ವರ್ಗಕ್ಕೆ ಹೊರಡುತ್ತಾನೆ.
ಅವನು ಹೇಳಿ ಹೋದಂತೆ ಸಮುದಾಯದವರೆಲ್ಲಾ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಪರಮಾತ್ಮನ ಸಮಕ್ಷಮದಲ್ಲಿ ಮರಿಯಮ್ಮ ಮತ್ತು ಸೇವಾಲಾಲ ತಮ್ಮ ವಾದಗಳನ್ನು ಮಂಡಿಸುತ್ತಾರೆ. ಕೊನೆಗೆ ಸೇವಾಲಾಲನ ಹಣೆಯ ಬರಹವನ್ನು ಪರೀಕ್ಷಿಸಿದ ಪರಮಾತ್ಮನು ಅವನಿಗೆ ಮದುವೆ ಎಂಬುದೇ ಸ್ಪಷ್ಟಪಡಿಸುತ್ತಾನೆ. ಇದರಿಂದ ಇನ್ನಷ್ಟು ಅವಮಾನಿತಳಾದ ಮರಿಯಮ್ಮ ಇನ್ನು ತನಗೆ ಉಳಿಗಾಲ ಇಲ್ಲವೆಂದು, ಲಂಬಾಣಿ ಸಮುದಾಯದಲ್ಲಿ ತನ್ನ ಅಸ್ತಿತ್ವವೇ ಇಲ್ಲದಂತಾಗುವುದೆಂದು ಯೋಚಿಸಿ ಸೇವಾನಿಗಿಂತ ಮೊದಲೇ ಭೂಲೋಕಕ್ಕೆ ಇಳಿದು ಬಂದು ಮಾರುವೇಷದಲ್ಲಿ ನೇರವಾಗಿ ತಾಯಿ ಧರ್ಮಿಣಿ ಬಾಯಿ ಬಳಿಗೆ ಹೋಗುತ್ತಾಳೆ. ‘‘ನಿನ್ನ ಮಗ ಸೇವಾಲಾಲ ದೇವಸ್ಥಾನದಲ್ಲಿ ಸತ್ತು ಬಿದ್ದಿದ್ದು, ನೀನು ಇಲ್ಲಿ ನಿಶ್ಚಿಂತವಾಗಿ ಕಸೂತಿ ಹಾಕುತ್ತಿದ್ದೀಯ ?’’ ಎಂದು ಅವಳಿಗೆ ಹೇಳುತ್ತಲೇ ದು:ಖಿತಳಾದ ಧರ್ಮಿಣಿ ಬಾಯಿ ಎದ್ದು-ಬಿದ್ದು ದೇವಸ್ಥಾನಕ್ಕೆ ಬಂದು ಯಾರು ತಡೆದರೂ ಕೇಳದೇ ಮಗನ ದೇಹದ ಮೇಲೆ ರಪ್ಪನೇ ಬಿದ್ದು ಗೋಳಿಡುತ್ತಾಳೆ.
ಸೇವಾ ಭಾಯಾ ಭೂಲೋಕಕ್ಕೆ ಕಾಲಿಡುವಷ್ಟರಲ್ಲಿ ಆತನ ದೇಹಕ್ಕೆ ಮನುಷ್ಯರ ಸ್ಪರ್ಶವಾಗುತ್ತಿದ್ದಂತೆಯೇ ಆತನ ಆತ್ಮವು ಮರಳಿ ದೇಹವನ್ನು ಸೇರದೇ ಹಿಂದಿರುಗಿ ಸ್ವರ್ಗಕ್ಕೆ ಹೋಗಿಬಿಡುತ್ತದೆ. ಹೀಗೆ ಅಮರನಾದ ಸೇವಾಲಾಲರ ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಬೃಹತ್ ಮಂದಿರಗಳನ್ನು ಕಟ್ಟಿದ್ದು, ಅದು ಬಂಜಾರರ ಪುಣ್ಯಕ್ಷೇತ್ರವಾಗಿದೆ. ಭಾರತದಾದ್ಯಂತ ನೆಲೆಯಾಗಿರುವ ಅಸಂಖ್ಯಾತ ಬಂಜಾರರು ಈ ತೀರ್ಥಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆದು ಪಾವನರಾಗುತ್ತಾರೆ. ಸೇವಾಲಾಲರ ಜನ್ಮಭೂಮಿ ಕರ್ನಾಟಕದ ಸೂರಗೊಂಡ ನಕೊಪ್ಪದಲ್ಲಿ ಇಂದು ಕರ್ನಾಟಕ ಸರಕಾರದ ಸುಪರ್ದಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿ, ವಿಸ್ತಾರವಾದ ತೀರ್ಥಕ್ಷೇತ್ರವಾಗಿ ಪರಿಣಮಿಸಿದೆ. ಸರಕಾರ ಈಚೆಗೆ ಮತ್ತೆ 13 ಎಕರೆ ಜಮೀನನ್ನು ನೀಡಿ, ಬೃಹತ್ ಪ್ರಮಾಣದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದೆ.
ಪ್ರತಿ ವರ್ಷ ನಡೆಯುವ ಸಂತ ಸೇವಾಲಾಲನ ಜಯಂತಿಗಾಗಿ ಕರ್ನಾಟಕದ ಭಕ್ತಾದಿಗಳು ಶಬರಿಮಲೆಯ ಸ್ವಾಮಿಗಳಂತೆ ವ್ರತಾಧಾರಿಗಳಾಗಿ ಶ್ವೇತವಸ್ತ್ರಗಳನ್ನುಟ್ಟು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ವಿಜೃಂಭಣೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. 2018ರ ಈ ಜಯಂತಿಯನ್ನು ಕರ್ನಾಟಕ ಸರಕಾರ ಅಧಿಕೃತವಾಗಿ ರಾಜ್ಯಾದ್ಯಂತ ಆಚರಿಸಲು ಮುಂದಾಗಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ. ಸೇವಾಲಾಲರು ಯೋಗಿಯಾಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ದೇಶಾದ್ಯಂತ ಸಂಚರಿಸಿ, ಅವರ ಬದುಕನ್ನು ಪಾವನ ಮಾಡುತ್ತಾ, ಅವರ ಬಾಳಿಗೆ ಬೆಳಕನ್ನು ನೀಡುತ್ತಾ, ಬಡತನ, ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿದ್ದವರಿಗೆ ಸುಂದರವಾಗಿ, ಸುವಿಚಾರಗಳನ್ನು ಹೇಳುತ್ತಾ, ತಿದ್ದಿ-ತೀಡುತ್ತಾ ಕಲ್ಯಾಣ ಮಾಡಿದ್ದಾನೆ.
ಸಂತ ಸೇವಾಲಾಲ ಮಹಾರಾಜ ಜಯಂತಿಯ ಶುಭಾಶಯಗಳು.